Prank call RJ Sunil Mysore ( Kannada Dubsmash )

TV9 Special: Srigala 111 Secret - Dr Sri Shivakumara Swamiji (The Walking God) Turns 111, What Is His Health Secret? ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka ತ್ರಿವಿಧ ದಾಸೋಹಿ, ನಡೆದಾಡೋ ದೇವರು, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಇಂದು 111ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶತಾಯುಷಿ ಶ್ರೀಗಳ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಇನ್ನು ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸಿಕೊಳ್ಳದ ಶ್ರೀಗಳು ಎಂದಿನಂತೆ ಮಠದ ಪೂಜಾ ಕೈಂಕರ್ಯಗಳಲ್ಲಿ ತೊಡಗಲಿದ್ದಾರೆ. ಶ್ರೀಗಳ ದರ್ಶನಕ್ಕಾಗಿ ಮಠಕ್ಕೆ ಜನಸಾಗರವೇ ಹರಿದುಬರುತ್ತಿದೆ. ಬೆಳಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಗುರುವಂದನಾ ಕಾರ್ಯಕ್ರಮದಲ್ಲಿ ಸುತ್ತೂರು ಸ್ವಾಮೀಜಿ, ಮುರುಘಾ ಮಠದ ಸ್ವಾಮೀಜಿ ಸೇರಿದಂತೆ ವಿವಿದ ಮಠಗಳ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಸಿದ್ದಗಂಗಾ ಶ್ರೀಗಳಿಗೆ ಪಾದಪೂಜೆ ಮಾಡಿ ಸ್ವಾಮೀಜಿಗಳು ಗುರುವಂದನೆ ಸಲ್ಲಿಸಲಿದ್ದಾರೆ. ಇನ್ನು ಶ್ರೀಗಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬರುವ ಭಕ್ತರಿಗೆ ಶ್ರೀಮಠದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಪ್ರಸಾದ ವಿನಿಯೋಗಕ್ಕೆ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದ್ದು, ಬೂರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಸುಮಾರು 1 ಲಕ್ಷ ಭಕ್ತರಿಗೆ ಆಗುವಷ್ಟು ಪಾಯಸ, 250 ಕ್ವಿಂಟಲ್ ಬೂಂದಿ, ಚಿತ್ರಾನ್ನ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ರೆಡಿ ಮಾಡಲಾಗಿದೆ. ಇನ್ನು ಸಂಜೆ 5 ಗಂಟೆಯ ನಂತ್ರ ಭಕ್ತರಿಂದ ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದಕ್ಕಾಗಿ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ದವಾಗಿದೆ.